Select Size
Quantity
Product Description
ಕರ್ನಾಟಕ ಜನಪದ ಸಂಗೀತ ಪಿತಾಮಹರ ಸಾಲುಗಳನ್ನೂ ಹೆಮ್ಮೆಯಿಂದ AziTeez ಅಂಗಿಯಾಗಿಸಿದೆ.ಕೇಳಿದಾಗಲೆಲ್ಲ ಕಂಪನವನ್ನುಂಟು ಮಾಡುವ ಗಂಡು ಹಾಡಿನ ಪಲ್ಲವಿಯೇ ಈ ಅಂಗಿಗೆ ಪ್ರೇರಣೆ. ಸಾಮಾಜಿಕ ಸ್ಥಿತಿಯನ್ನು ಹಾಡಾಗಿಸಿದ ಶರಿಫ಼ಜ್ಜರನ್ನು ಜೀವಂತವಾಗಿರಿಸುವ ಸಾಲುಗಳಿವು. " ಸ್ವರ ಬರದೆ ಬಾರಿಸದಿರು ತಂಬೂರಿ ಮನಸ್ಸಿನ ಎಲ್ಲಾ ತುಡಿತಗಳು ಸುಸ್ವರವಾಗಲಿ .ಸುಸ್ವರಗಳಲ್ಲಿ ಸರ್ವರ ಜೀವ ತಂಬೂರಿಗಳು ಮಿಡಿಯಲಿ ಎಂಬುದು ಈ ಹಾಡಿನ ಹಾರೈಕೆ. ನಿಮ್ಮ ಸ್ವರ ಕಂಪನಕ್ಕೆ ಹೊಂದುವ ಅಂಗಿ ಧರಿಸಿ ಕನ್ನಡಿಗರಾಗಿ. ಅರಮನೆ ಮೈದಾನದಲ್ಲಿ ನಡೆದ ಮೊದಲ ’ಕನ್ನಡವೇ ಸತ್ಯ’ ಕಾರ್ಯಕ್ರಮದಲ್ಲಿ ಅಶ್ವತ್ಥ್ ಈ ಹಾಡು ಹಾಡಿದಾಗ ಅಲ್ಲಿದ್ದ ಲಕ್ಷಗಟ್ಟಲೆ ಜನ ಉನ್ಮಾದ ಬಂದು ಕುಣಿದಾಡಿದ್ದು ಇನ್ನೂ ಕಣ್ಣಿಗೆಕಟ್ಟಿದಂತಿದೆ. ಶಿಶುನಾಳ ಶರೀಫ ಹಾಗೂ ಅಶ್ವತ್ಥ್ ಅವರ ಸವಿ ನೆನಪಿನಲ್ಲಿ ನಮ್ಮ ಕಿರು ಪ್ರಯತ್ನ