Select Size
Quantity
Product Description
ಮನಸು ಕನ್ನಡವಾಗಿದೆ, ಮನೆ ಕರ್ನಾಟಕವಾಗಿದೆ, ಇಂತಿರಲು ಮೈಮೇಲಿನ ಧಿರಿಸು ಕನ್ನಡವಾದರೆ? ಇದೇ ನವೆಂಬರಿನಲ್ಲಿ ಕರ್ನಾಟಕದ ಇನ್ನೊಂದು ಹುಟ್ಟುಹಬ್ಬದ ಸಂಭ್ರಮಕ್ಕೆ, ಆಚರಣೆಗೆ ಹೊಸ ಕನ್ನಡದ ಅಂಗಿ ಸಿದ್ಧವಿದೆ. ಇದು ಕೇವಲ ಅಂಗಿಯೊಂದರ ಮಾತಲ್ಲ. ನಾಡು – ನುಡಿಯ ಸ್ಮರಣೆಯ ಜೊತೆ ಜೊತೆಗೆ ಕನ್ನಡದ ಅಂಶಗಳನ್ನು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗ್ಗೆ ನಮ್ಮ ಕಳಕಳಿಯ ಪ್ರಯತ್ನ .ನಮ್ಮ ಹುಟ್ಟುಹಬ್ಬಕ್ಕೆಲ್ಲ ಹೊಸ ಬಟ್ಟೆ ತೊಟ್ಟು ಸಂಭ್ರಮ ಪಡುವ ನಾವು, ಏಕೆ ಈ ವರ್ಷ ನಮ್ಮ ಪ್ರೀತಿಯ ನೆಲದ ಹುಟ್ಟುಹಬ್ಬಕ್ಕೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಬಾರದೇಕೆ ಎಂಬ ಖುಷಿಯ ವಿಚಾರದೊಂದಿಗೆ ಈ ಅಂಗಿ ಅನಾವರಣಗೊಳ್ಳುತ್ತಿದೆ. ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೆ, ಮೂಗ್ನಲ್ ಕನ್ನಡ್ ಪದವಾಡ್ತೀನಿ ನನ್ ಮನಸನ್ ನೀ ಕಾಣೆ.. ಜಿ.ಪಿ.ರಾಜರತ್ನಂರವರ ರತ್ನ ನುಡಿಗಳು ನಮ್ಮ ವಿನ್ಯಾಸಕ್ಕೆ ಸ್ಪೂರ್ತಿ. ಬಾಯಿ ಹೊಲಿದಿದ್ದರೂ ಕನ್ನಡವನ್ನಾಡುವ ನಮ್ಮ ಚಿತ್ರವೇ ಅಂಗಿಯ ಮೇಲಿದೆ. ಈ ಅಂಗಿ ನಮ್ಮದೇ ಪ್ರತಿಬಿಂಬ. ಕನ್ನಡಕ್ಕಾಗಿ ನಡೆಸಿರುವ ಕಿರು ಪ್ರಯತ್ನದ ಜೊತೆ ನಿಮ್ಮ ಕೈಯಿರಲಿ. ಅದೇ ಕೈ ಕಲ್ಪವೃಕ್ಷವಾಗಲಿ. ಎರಡು ಮಾದರಿಗಳಲ್ಲಿ ಬಿಡುಗಡೆಗೊಳ್ಳುತ್ತಿರುವ ಅಂಗಿಯ ಪೂರ್ವರೂಪವಷ್ಟೇ ಇಲ್ಲಿದೆ. ಖರೀದಿಸುವವರು . ಆದರಿಸು ಕನ್ನಡವ. ಆಧರಿಸು ಕನ್ನಡವ.ಧರಿಸು ಕನ್ನಡವ. |